Thursday, January 24, 2008

ಕವಿತೆ ಕವಿತೆ ನೀನೇಕೆ ಪದಗಳಲಿ ಕುಳಿತೆ
ಕವಿತೆ ಕವಿತೆ ನೀನೇಕೆ ರಾಗದಲಿ ಬೆರೆತೆ
ನನ್ನೆದೆಯ ಗೂಡಲ್ಲಿ ಕವಿತೆಯ ಸಂತೆ
ಒ ಒಲವೇ ನೀ ತಂದ ಹಾಡಿಗೆ ಸೋತೆ ||ಕವಿತೆ||

ಅವಳು ಬರಲು ಮನದಲ್ಲಿ ಪದಗಳದೆ ಚಿಲುಮೆ
ಮನದ ಕಡಲ ದಡದಾಟೋ ಅಲೆಗಳಲು ನಲುಮೆ
ಹೊಮ್ಮುತಿದೆ ರಾಗದ ಈ ಸ್ವರ ಮೀರೋ ತಿಮಿರು
ಚಿಮ್ಮುತಿದೆ ಸುಳ್ಳಡುವ ಕವಿಯಾದ ಪೊಗರು|| ಅವಳು||

ಮುಗಿಲ ಹೆಗಲ ಮೇಲೇರಿ ತೇಲುತಿದೆ ಹೃದಯ
ಮಡಿಲ ಹುಡುಗಿ ಎದೆ ಬಾಗಿಲಿಗೆ ಬಂತೋ ಪ್ರಣಯ
ಉನ್ಮಾದ ತಾನಾಗಿ ಹಾಡಗೋ ಸಮಯ
ಏಕಾಂತ ಕಲ್ಲನ್ನು ಮಾಡುವುದೋ ಕವಿಯ||ಮುಗಿಲ||

No comments: