Thursday, September 11, 2008

ಪ್ರಥಮ ವಿದೇಶ ಪ್ರಯಾಣ-೧

ಇದು ನನ್ನ ಪ್ರಥಮ ವಿದೇಶ ಪ್ರಯಾಣದ ಅನುಭವ....
Femto Gateway(A Radio Network Controller) project ನ ಕಾರ್ಯ ನಿಮಿತ್ತವಾಗಿ ನಾನು Shenzhen,ಚೀನಾ ಗೆ ಪ್ರಯಾಣ ಬೆಳೆಸಬೇಕಾಯ್ತು.೩೦ ನೇ ಆಗಸ್ಟ್ ನಂದು ನಾನು ಹೊರಡಬೇಕೆಂದು ನಿಗದಿಯಾಯ್ತು.ಅಂದು ನಾನು ನನ್ನ ತಂದೆ,ತಾಯಿ ಮತ್ತು ಸ್ನೇಹಿತರೊಡನೆ ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಹೋದೆ.ನಾನು Shenzhen,ಚೀನಾ ಗೆ ಸಿಂಗಾಪುರ್, ನಂತರ ಹಾಂಗ್ ಕಾಂಗ್ ಮೂಲಕ ಹೋಗಬೇಕಿತ್ತು.ಸರಿ ಸುಮಾರು ೯ ಗಂಟೆಗೆ ಎಲ್ಲರು ನನ್ನನ್ನು ಬೀಳ್ಕೊಟ್ಟರು.ನಂತರ ನಾನು Boarding Pass, Baggage Checking ಮತ್ತು Immigration ಚೆಕ್ ಮಾಡಿಸಿಕೊಂಡು ೧೧ ಕ್ಕೆ ನನ್ನ ಮೊದಲ ವಿಮಾನ ಪ್ರಯಾಣ ಕ್ಕೆ ಸಜ್ಜಾದೆನು.

ಎಲ್ಲ ಮುಂಜಾಗ್ರತೆ ಕ್ರಮಗಳನ್ನು ಟಿವಿ ಮೂಲಕ ಬಿತ್ಥರಿಸಿದರು ಮತ್ತು ನಾನು ಅದನ್ನು ಅನುಸರಿಸಿದೆ.ಈಗ ವಿಮಾನ ಮೇಲೆ ಹಾರಲು ಶುರು ಮಾಡಿತು.ಮೊದಲಿಗೆ ಸ್ವಲ್ಪ Pressure variation ಎನಿಸಿತಾದರೂ ನಂತರ ನಾನು ಹೊಂದಿಕೊಂಡೆ.ನಂತರ ಗಗನ ಸಖಿಯರು ಊಟೋಪಚಾರ ಶುರುಮಾಡಿದರು.ಬೆಂಗಳೂರಿನಿಂದ ಸಿಂಗಪುರಕ್ಕೆ ಸುಮಾರು ೩.೩೦ ಗಂಟೆ ಪ್ರಯಾಣ.ನಾನು ಆ ವಿಮಾನದ ಪ್ರಯಣಿಕರನ್ನೇಲ್ಲ ನೋಡಿದೆ.ಕೆಲವರು ಸಿಂಗಪುರಕ್ಕೆ ಮತ್ತೆ ಹಲವಾರು ಮಂದಿ ಸಿಂಗಪುರದಿಂದ ಪ್ರಪಂಚದ ಇನ್ಯಾವುದೋ ಮೂಲೆಗೆ. ಸಿಂಗಾಪುರದ ವಿಮಾನ ನಿಲ್ದಾಣ ಬಹು ದೊಡ್ದದು ಮತ್ತು ಒಂದು ಕಡೆ ಇಂದ ಮತ್ತೊಂದು ಕಡೆಗೆ ಹೋಗಲು Sky ಟ್ರೈನ್ ವ್ಯವಸ್ಠೆ.ನಾನು ಟರ್ಮಿನಲ್ ೨ ರಿಂದ ಇಳಿದು ಟರ್ಮಿನಲ್ ೩ ಕ್ಕೆ ಹೊರಟೆ.ದಾರಿಯುದ್ದಕ್ಕು ಶೋಪ್ಪ್ಪಿಂಗ್ ಮಾಲ್ ಗಳು ಮತ್ತು ವೈಭೋಗ ವಸ್ತುಗಳ ಮಾರಾಟ ನಡೆಯುತ್ತಿತ್ತು. ಟರ್ಮಿನಲ್ ೩ ರಲ್ಲಿ ನಾನು ಹಾಂಗ್ ಕಾಂಗ್ ಗೆ ಹೋಗಬೇಕಾದ ವಿಮಾನಕ್ಕೆ ಕಾಯುತ್ತ ಕುಳಿತೆ. ಅಲ್ಲಿ ನಾನು ನಾಲ್ಕು ಜನ ಸರ್ದಾರ್ಜಿಗಳನ್ನು ಭೇಟಿಯಾದೆ. ಅವರೆಲ್ಲರೂ ಚಂದಿಗರ್ ನಿಂದ ಬಂದು ಹಾಂಗ್ ಕಾಂಗ್ ನಲ್ಲಿ ಕಾರ್ಯಕ್ರಮ ನಡೆಸಿಕೊಡಲು ಹೋಗುತ್ತಿದ್ದರು. ಅವರೊಂದಿಗೆ ಹಿಂದಿ ಯಲ್ಲಿ ಮಾತನಾಡಿ ಖುಷಿಯಾಯ್ತು.

ಅಲ್ಲಿಂದ ನಾನು ಹಾಂಗ್ ಕಾಂಗ್ ಹೋಗುವ ವಿಮಾನವನ್ನುಸುಮಾರು ೪.೦೦ ಗಂಟೆಗೆ ಏರಿದೆ.ಈ ಬಾರಿ ನನಗೆ ಕಿಟಕಿ ಬಳಿ ಸೀಟ್ ಸಿಕ್ಕಿತು.ವಿಮಾನ ಮೇಲೆರುತ್ತಿದಂತೆ ನಾನು ಪ್ರಯಾಣದ ಸವಿಯನ್ನು ಅನುಭವಿಸತೊಡಗಿದೆ. ಮೋಡಗಳನ್ನು ಹತ್ಹಿರದಿಂದ ನೋಡುವ ಹಿತವೇ ಬೇರೆ.ಸಾಕಷ್ಟು ಬೆಳಕು ಇದ್ದಿದ್ದರಿಂದ ಭೂಮಿಯ ಸೊಬಗು, ಐಶ್ವರ್ಯ ಮತ್ತು ಸೌಂದರ್ಯ ವನ್ನು ಆಕಾಶ ದೆತ್ತರದಿಂದ ಸವಿದೆ.ಮತ್ತೆ ಗಗನಸಖಿಯರ ಉಪಚಾರ ಆರಂಭವಾಯ್ತು. ಸಿಂಗಪುರದಿಂದ ಹಾಂಗ್ ಕಾಂಗ್ ಗೆ ೪ ಗಂಟೆ ಪ್ರಯಾಣ. ಹಾಂಗ್ ಕಾಂಗ್ ನಿಜಕ್ಕೂ ಸುಂದರ ತಾಣ .ಅಲ್ಲಿನ Well planned Bridges,Highways,subways and ಇನ್ನಿತರ constructions ನೋಡಿ ಅಚ್ಚರಿಗೊಂಡೆ.ಸುಮಾರು ೮.೩೦ ಕ್ಕೆ ಹಾಂಗ್ ಕಾಂಗ್ ನಲ್ಲಿ ಇಳಿದೆ.ಅಲ್ಲಿಂದ ಶಿಪ್(ಫೇರ್ರಿ) ಮೂಲಕ ನಾನು ಸ್ಹೆಂಜ್ಹೇನ್ ಗೆ ಹೋಗಬೇಕಿತ್ತು.ಹಡಗಿನಲ್ಲಿ ಸುಮಾರು ೫೦ ನಿಮಿಷದ ಪ್ರಯಾಣ.ಹಡಗು ವೇಗವಾಗಿ ನೀರನ್ನು ಸೀಳಿಕೊಂಡು ಹೋಗುತಿತ್ತು.ಅಂತು ಸ್ಹೆಂಜ್ಹೇನ್ ತಲುಪಿದೆ ಎಂದು ಮನಸ್ಸು ಹಗುರಾಯ್ತು.ನಂತರ ನನ್ನCheckin Baggage ಪಡೆದುಕೊಂದೆನು.
ಆಮೇಲೆ China Security Check, Immigration Check and Authentication ಇಂಟರ್ವ್ಯೂ ನಡೆಇತು.ಸರಿ ನಂತರ ಟ್ಯಾಕ್ಸಿ ಮೂಲಕ ಜ್ಹುಜ್ಹುಲಿನ್ ಹೋಟೆಲ್ ತಲುಪಿದೆನು.
ಹೀಗೆ ನನ್ನ ಪ್ರಥಮ ವಿದೇಶ ಪ್ರಯಾಣದ ಒಂದು ಭಾಗ ಮುಗಿಯಿತು.

1 comment:

Anonymous said...

ಹ್ಮ್, ತುಂಬ ಚೆನ್ನಾಗಿ ವರ್ಣಿಸಿದ್ದೀಯ :)