Saturday, September 20, 2008

ಹಾಂಗ್ ಕಾಂಗ್ ಮತ್ತು ಮಕಾವ್ ವಿಹಾರ -೧

ಬಾರಿ ನಾನು ನನ್ನ ಹಾಂಗ್ ಕಾಂಗ್ ಮತ್ತು ಮಕಾವ್ ವಿಹಾರ ಬಗ್ಗೆ ಬರೆಯುತಿದ್ದೇನೆ..
ಸ್ಹೆಂಜ್ಹೇನ್ ಗೆ ಬಂದ ನಂತರ, ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಹೆಚ್ಚು ಸಮಯ ಹಿಡಿಯಲಿಲ್ಲ..ಹೋಟೆಲ್
Accommodation and Hospitality ಚೆನ್ನಾಗಿದೆ.ಕಂಪನಿಯ ಆಫೀಸ್ ಬಹಳ ಹತ್ತಿರದಲ್ಲಿದೆ.ನನ್ನ ಪುಣ್ಯಕ್ಕೆ ೧೫ ದಿನಮೊದಲೇ ನಮ್ಮ ಕಂಪನಿಯ ಬೇರೆ ಪ್ರಾಜೆಕ್ಟ್ ನವನೊಬ್ಬ ಇಲ್ಲಿಗೆ ಬಂದಿದ್ದ.ಮೊದಲ ವೀಕೆಂಡ್ ಹಾಂಗ್ ಕಾಂಗ್ ಮತ್ತು ಮಕಾವ್ಹೋಗುವುದೆಂದು ನಿರ್ಧರಿಸಿದೆವು.ಬೆಳಿಗ್ಗೆ ಕ್ಕೆ ಮೆಟ್ರೋ ಮೂಲಕ ಶೆಕೌ ಪೋರ್ಟ್ ತಲುಪಿದೆವು.ಹಾಂಗ್ ಕಾಂಗ್, ಚೀನಾ ಭಾಗವಾದರೂ ಸಹ ಅಲ್ಲಿನ Administration and Foreign policy ಬೇರೆಯೇ ಇದೆ.ಮತ್ತೆ Immigration and Visa Interview ತೆಗೆದುಕೊಳಬೇಕಾಯ್ತು. ಅಂತು ಹಾಂಗ್ ಕಾಂಗ್ ಪ್ರವೇಶಿಸಿದೆವು.

ಹಾಂಗ್ ಕಾಂಗ್ ನಿಜಕ್ಕೂ ಮನೋಹರ ಮತ್ತು ನವೀನ ತಾಣ.ಮೊದಲು ನಾವು ಬುಕ್ ಮಾಡಿದ್ದ ಹೋಟೆಲ್ ಗೆ ಹೋಗಿ ನಮ್ಮಬ್ಯಾಗ್ ಇಟ್ಟೆವು.ಅಲ್ಲಿಂದ ಮೊದಲಿಗೆ ವಿಕ್ಟೋರಿಯಾ
ಹಾರ್ಬರ್ ಗೆ ಬಂದೆವು.ಅದನ್ನು Avenue of Stars ಎಂತಲೂ ಕರೆಯುತ್ತಾರೆ.
ಅಲ್ಲಿ ದೊಡ್ಡ ದೊಡ್ಡ ಕಮರ್ಷಿಯಲ್ ಶಿಪ್,ಫೇರಿಗಳು ಮತ್ತು ಹಾಂಗ್ ಕಾಂಗ್ ಸೌದರ್ಯ ವನ್ನು ಸವಿಯುತ್ತ ನಿಂತೆವು.ಅಲ್ಲಿಂದನತ್ತ ಹೆಜ್ಜೆ ಹಾಕಿದೆವು. ಗ್ಯಾಲರಿ ನಿಜಕ್ಕೂ ಮನಮೋಹಕವಾಗಿತ್ತು.ಆಲಿ ಹಳೆಯ ಗ್ರೀಕ್ ಮತ್ತು ಇಟಲಿಯಚಿತ್ರಕಲಾ ಸಂಗ್ರಹವಿತ್ತು.ಚೀನಾ ದೇಶದ
Museum of Art ಹಿಂದಿನ ಕಾಲದ ಆಭರಣ,ದಿನೋಪಯೋಗಿ ವಸ್ತುಗಳಿದ್ದವು ಮತ್ತು ರೋಮ್ ಪತನದಅವಶೇಷಗಳಿದ್ದವು.ನಂತರ Start Ferry Night Trip ಗೆ ಟಿಕೆಟ್ ಖರೀದಿಸಿದೆವು.ಅಲ್ಲಿಂದ Ocean Park ಗೆ ಬಸ್ ಮೂಲಕಹೋದೆವು.ಇದೊಂದು ತುಂಬಾ ದೊಡ್ಡ Amusement water ಪಾರ್ಕ್.ಅಲ್ಲಿ ಮೊದಲು ಫಿಶ್ ಪಾರ್ಕ್ ಗೆ ಬೇಟಿನೀಡಿದೆವು.ಪ್ರಪಂಚದ ಎಲ್ಲ ತರದ ಮೀನುಗಳನ್ನು ನೀವು ಇಲ್ಲಿ ಕಾಣಬಹುದು.ಎಲ್ಲವನ್ನು ನೋಡಿಕೊಂಡು ಬೇರೆ ಬೇರೆ ಆಟಗಳನ್ನುಆಡಿದೆವು.ಅಲ್ಲಿಗೆ ಸಂಜೆ ಸುಮಾರು ಗಂಟೆಯಾಯ್ತು.ನಂತರ ಮತ್ತೆ ವಿಕ್ಟೋರಿಯಾ ಹಾರ್ಬರ್ ಗೆ ಬಂದು Start Ferry ಏರಿದೆವು.ಗಗನದಲ್ಲಿ ಲೇಸರ್ ಬೆಳಕಿನ ಆಟ ಶುರುವಾಯಿತು.ಈಗಂತೂ ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ.ನಂತರಊಟಕ್ಕೆಂದು ಸಮೀಪವೇ ಇದ್ದ ಭಾರತೀಯ ಮಾದರಿ ಹೋಟೆಲ್ ಸೇರಿದೆವು.ಅಲ್ಲಿನ ಮೆನು ನಲ್ಲಿ ದಾವಣಗೆರೆ ಬೆಣ್ಣೆದೋಸೆ ಕಂಡುನಿಜಕ್ಕೂ ಆಶ್ಚರ್ಯ ಚಕಿತನಾದೆನು(ದಾವಣಗೆರೆ ಹ್ಯಾಟ್ಸ್ ಆಫ್). ಊಟ ಮಾಡಿದ ನಂತರ ಮಲಗಲೆಂದು ಹೋಟೆಲ್ ತಲುಪಿದೆವು.

1 comment:

Anonymous said...

Davangere benne dose in hong kong!! Wow!! Awesome :)