Monday, September 22, 2008

ಹಾಂಗ್ ಕಾಂಗ್ ಮತ್ತು ಮಕಾವ್ ವಿಹಾರ -೨

ಎರಡನೆಯ ದಿನ ನಾವು ಹೋಟೆಲ್ ಚೆಕ್-ಔಟ್ ಮಾಡಿಕೊಂಡು ನ್ಯೊಂಗ್ ಪಿಂಗ್ ನತ್ತ ಮೆಟ್ರೋ ಮೂಲಕ ಪ್ರಯಾಣ ಬೆಳೆಸಿದೆವು.ನ್ಯೊಂಗ್ ಪಿಂಗ್ ನಲ್ಲಿ ಪ್ರಪಂಚದ ಅತೀ ದೊಡ್ಡ ಬುದ್ಧನ bronze statue ಇದೆ.ವಿಶೇಷವೇನೆಂದರೆ ವಿಗ್ರಹ ಬೆಟ್ಟದ ಮೇಲಿದೆ ಮತ್ತು ಅಲ್ಲಿಗೆ ತಲುಪಲು ಸುಮಾರು ೧೦ ಕಿಮಿ Cable car ನಲ್ಲಿ ಪ್ರಯಾಣ.ಅಂತು ಬುದ್ಧನ ಮತ್ತು ಇನ್ನಿತರ ಸಹಚರರ ದರ್ಶನ ಮುಗಿಸಿಕೊಂಡು ವಾಪಾಸ್ ಹಾಂಗ್ ಕಾಂಗ್ ಸೆಂಟ್ರಲ್ ತಲುಪಿದೆವು.ಅಲ್ಲಿಂದ ಮಕಾವ್ ಗೆ ಮತ್ತೆ ಶಿಪ್ ಏರಿದೆವು.

ಮಕಾವ್ ಮುಂಚೆ ಪೋರ್ಚುಗೀಸ್ ವಶದಲ್ಲಿತ್ತು.ಹಾಗಾಗಿ ಇಂಗ್ಲಿಷ್ ಕೂಡ ಅಲ್ಲಿರಲಿಲ್ಲ.ನಮ್ಮ ಪುಣ್ಯಕ್ಕೆ ಮಕಾವ್ ಶಿಪ್ ಪೋರ್ಟ್ ನಲ್ಲಿ ಮಾರ್ಗದರ್ಶಕಿಯೊಬ್ಬಳು ಸಿಕ್ಕಳು.ಅವಳ ಬಳಿ ಇಂಗ್ಲಿಷ್ ಮ್ಯಾಪ್+ಗೈಡ್ ಪಡೆದುಕೊಂಡು ಮಕಾವ್ ಟವರ್ ಹೋಗುವ ಬಸ್ ಏರಿ ಕುಳಿತೆವು.ಮಕಾವ್ ವನ್ನು ಸ್ವಲ್ಪ ಹಳೆಯದಾದ ಸಿಟಿ.ಬಸ್ ರಾಜಾರೋಷವಾಗಿ ಅಲ್ಲಿನ ರಸ್ತೆಗಳಲ್ಲಿ ಚಲಿಸುತ್ತಿತ್ತು. ಮಕಾವ್ ಟವರ್ ಪ್ರಪಂಚದ ನೆ ದೊಡ್ಡ ಟವರ್.೩೫೦ ಮೀಟರ್ ಎತ್ತರದ ವ್ಯೂ ಪಾಯಿಂಟ್ ನಲ್ಲಿ ನಿಂತೆವು.ಇಲ್ಲೂ ಒಂದು ಸ್ಪೆಷಾಲಿಟಿ
ಏನೆಂದರೆ,
ನೆಲಮಾಳಿಗೆ ಪೂರ ಗಾಜಿನದು. ಟವರ್ Bungy Jumping,Skywalk and other Adventure activities ಗೆ ಪ್ರಸಿದ್ದ.ವಿಶ್ವದ ನಾನಾ ಕಡೆಗಳಿಂದ ಬಂದ ಪ್ರವಾಸಿಗರಿದ್ದರು.ಅಲ್ಲಿಂದ ಹಳೆಯ Roman Catholic Church ಕಡೆಗೆ
ತೆರಳಿದೆವು.
ಇಲ್ಲಿ ಜೀಸಸ್, ಮದರ್ ಮೇರಿ ಪ್ರತಿಮೆಗಳಿದ್ದ ಚರ್ಚ್ ಇತ್ತು.ನಂತರ ಅಲ್ಲಿಯೇ ಊಟ ಮುಗಿಸಿಕೊಂಡು ಮರಳಿ ಸ್ಹೆಂಜ್ಹೇನ್ ಗೆ ಶಿಪ್ ಮೂಲಕ ತೆರಳಿದೆವು.

No comments: